೨೦೨೩: ಪ್ರಯಾಣ

From Wikimania
This page is a translated version of the page 2023:Travel and the translation is 98% complete.
Outdated translations are marked like this.


16–19 August 2023, Singapore and Online
Diversity. Collaboration. Future.

ಪಕ್ಷಿನೋಟ

ಸಮಭಾಜಕ ರೇಖೆಯ ಸಮೀಪವಿರುವ ಪ್ರಮುಖ ಜಾಗತಿಕ ನಗರಗಳಲ್ಲಿ ಸಿಂಗಾಪುರವೂ ಒಂದು. ಇಲ್ಲಿ ಈ ವರ್ಷದ(೨೦೨೩ರ ಸಾಲಿನ) ಸಮ್ಮೇಳನ ನಡೆಯಲಿದೆ. ಸಿಂಗಾಪುರದಲ್ಲಿ ವರ್ಷಪೂರ್ತಿ ಬಿಸಿಲು ಮತ್ತು ಆರ್ದ್ರವಾಗಿರುತ್ತದೆ, ಹಗಲಿನ ತಾಪಮಾನವು ೩೦-೩೨o ಸೆಲ್ಷಿಯಸ್ (೮೬-೯೦o ಫ್ಯಾರನ್‌ಹೈಟ್) ಇರುತ್ತದೆ. ಆಗಸ್ಟ್‌ನಲ್ಲಿ ಮಳೆಯು ಸಾಮಾನ್ಯವಾಗಿದೆ, ಆದ್ದರಿಂದ ಹಗುರವಾದ ಬಟ್ಟೆ ಮತ್ತು ಛತ್ರಿಯನ್ನು ತರಲು ಶಿಫಾರಸು ಮಾಡಲಾಗುತ್ತದೆ.

ಸ್ಥಳ

ಸಮ್ಮೇಳನ ನಡೆಯುವ ಸ್ಥಳದ ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ

ಕಾರ್ಯಕ್ರಮವು ಸಿಂಗಾಪುರದ ಡೌನ್‌ಟೌನ್‌ನಲ್ಲಿರುವ ಸನ್‌ಟೆಕ್ ಸಿಂಗಾಪುರ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್ ನಲ್ಲಿ ನಡೆಯಲಿದೆ. ಇದು ಪೂರ್ವ-ಸಮ್ಮೇಳನ, ಹ್ಯಾಕಥಾನ್, ಉದ್ಘಾಟನಾ ಸಮಾರಂಭ/ (ಭೋಜನ), ಮುಖ್ಯ ಸಮ್ಮೇಳನ, ಮತ್ತು ಸಮಾರೋಪ ಕಾರ್ಯಕ್ರಮ (ಹಸ್ತಾಂತರ) ಒಳಗೊಂಡಿದೆ.
ನಿಖರ ಜಾಗ: 1° 17' 34.21"N, 103° 51' 24.76"E.

ಸಿಂಗಾಪುರದ ಪಾಸಿರ್ ಪಂಜಾಂಗ್‌ನಲ್ಲಿರುವ ಗೂಗಲ್ ಏಷ್ಯಾ ಪೆಸಿಫಿಕ್ ಆಫೀಸ್ನಲ್ಲಿ ಆಗಸ್ಟ್ ೧೫ರಂದು ಸಮ್ಮೇಳನಾ ಪೂರ್ವದ ಪರ್ಯಾಯ ಕಾರ್ಯಕ್ರಮಗಳು ನಡೆಯಲಿದೆ.

Gardens by the Bayನಲ್ಲಿ ನಮ್ಮ ಸಮಾರೋಪ ಸಮಾರಂಭ ನಡೆಯಲಿದೆ.

ಸಮ್ಮೇಳನಾನಂತರದ ಕಾರ್ಯಕ್ರಮದ ಸ್ಥಳ ನ್ಯಾಷನಲ್ ಲೈಬ್ರರಿ ಆಫ್ ಸಿಂಗಾಪುರ. ಇದಕ್ಕೆ ಪ್ರತ್ಯೇಕ ನೋಂದಣಿಯ ಅಗತ್ಯವಿದೆ.


360 View of Rooms : 307 | 308 | 309 | 310 | 311 | 324 | 325 | 326



ಸಿಂಗಾಪುರಕ್ಕೆ ಪ್ರವೇಶ

ಸಿಂಗಾಪುರ ಪ್ರವೇಶಕ್ಕೆ ಬೇಕಾದ ಅಗತ್ಯತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇ-ವೀಸಾ ವಿಭಾಗವನ್ನು ನೋಡಿ.


ವೈಯಕ್ತಿಕ ಔಷಧಿಗಳು

ತರಬೇಕಾದ ಯಾವುದೇ ಔಷಧಿಗಳ ಸ್ಥಿತಿಯನ್ನು ಪರಿಶೀಲಿಸಲು ಆನ್‌ಲೈನ್ ಸೇವೆಯನ್ನು ಬಳಸಿಕೊಳ್ಳಿ. ಕೆಲವು ಔಷಧಿಗಳನ್ನು ಸಿಂಗಾಪುರದ ಒಳಗೆ ತರಲು ಕನಿಷ್ಠ ೧೦ ದಿನಗಳ ಮೊದಲು ಪೂರ್ವ-ಅನುಮೋದನೆಗಾಗಿ ಅರ್ಜಿ ಸಲ್ಲಿಸಬೇಕಾಗಬಹುದು, ನೀವು ತರುವ ಎಲ್ಲಾ ಔಷಧಿಗಳನ್ನು ಒಳಗೆ ಬಿಡಲೇಬೇಕಿಲ್ಲ. ಕೆಲವು ನಿಷೇಧಿತ ಔಷಧಿಗಳನ್ನು ನಿಷೇಧಿಸಬಹುದು. ನೋಡಿ: ಔಷಧ ತಪಾಸಣೆ ಪರಿಕರಗಳು

ಪ್ರತಿ ಔಷಧಿಯನ್ನು ಅದರ ಸಂಯುಕ್ತ/ಜೆನೆರಿಕ್ ಹೆಸರಿನಿಂದ- ಮಾರಾಟದ ಹೆಸರಿನ ಬದಲಾಗಿ ರಾಸಾಯಾನಿಕ ಸಂಯುಕ್ತದ ಹೆಸರು (ಉದಾ-ಪ್ಯಾರಸಿಟಾಮೋಲ್ ರಾಸಾಯನಿಕ ಸಂಯುಕ್ತದ ಹೆಸರು. ಆದರೆ ಮಾರುಕಟ್ಟೆಯಲ್ಲಿ ಕ್ರೋಸಿನ್ ಅಥವಾ ಡೋಲೋ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಸರು)- ಗುರುತಿಸಿ ಇಟ್ಟುಕೊಳ್ಳಿ. ನೀವು ಪ್ರತಿ ಔಷಧಿಯ ಮೂಲಕ ಹೋದಂತೆ ಪುಟವು ಹುಡುಕಾಟಗಳ ಟ್ರ್ಯಾಕ್ ಅನ್ನು ಇರಿಸುತ್ತದೆ ಮತ್ತು PDF ಅನ್ನು ಉತ್ಪಾದಿಸುತ್ತದೆ ಮತ್ತು ನೀವು ಆ ಪಟ್ಟಿಯನ್ನು ಪೂರ್ವ-ಅನುಮೋದಿತ ಮತ್ತು ನಿಮಗೆ ಅನುಮೋದನೆ ಅಗತ್ಯವಿರುವವುಗಳೊಂದಿಗೆ ಇರಿಸಬಹುದು.

ನಿರ್ದಿಷ್ಟ ಅನುಮೋದನೆಯ ಅಗತ್ಯವಿರುವ ಔಷಧಿ

ನೀವು ನಿರ್ದಿಷ್ಟ ಅನುಮೋದನೆಯ ಅಗತ್ಯವಿರುವ ಔಷಧಿಗಳನ್ನು ಹೊಂದಿದ್ದರೆ ನೀವು ಈ ಪುಟಕ್ಕೆ https://www.hsa.gov.sg/personal-medication/apply-approval ಗೆ ಹೋಗಿ ಇಲ್ಲಿ ನಿಮ್ಮ ಪ್ರಯಾಣದ ವಿವರಗಳ ಅಗತ್ಯವಿರುವ ಫಾರ್ಮ್‌ಗಳ ಸರಣಿಯನ್ನು ಭರ್ತಿ ಮಾಡಿ. ಅದು ಪಾಸ್‌ಪೋರ್ಟ್ ಸಂಖ್ಯೆ, ಆಗಮನದ ವಿವರಗಳು ಮತ್ತು ಉಳಿಯುವ ಅವಧಿಯನ್ನು ಕೇಳುತ್ತದೆ. ಇದು ಅಪ್ಲಿಕೇಶನ್ PDF ಅನ್ನು ರಚಿಸುತ್ತದೆ ಮತ್ತು ನಿಮ್ಮ ವೈದ್ಯರು ಅಥವಾ ನಿಮ್ಮ ಡೋಸೇಜ್ ಮತ್ತು ಹೆಸರನ್ನು ತೋರಿಸುವ ಔಷಧಿಕಾರರು/ಕೆಮಿಸ್ಟ್ ಲೇಬಲ್‌ನಿಂದ ಸ್ಕ್ರಿಪ್ಟ್‌ನ ಛಾಯಾಚಿತ್ರವನ್ನು ನೀವು ಒದಗಿಸಬೇಕಾಗುತ್ತದೆ.

ಪ್ರತಿಕ್ರಿಯೆಗಾಗಿ ೧೦ ದಿನಗಳವರೆಗೆ ಕಾಯಬೇಕಾಗಬಹುದು. ಈ ಪ್ರಕ್ರಿಯೆಗಳನ್ನು ಹೊರಡುವ ಸುಮಾರು 14-21 ದಿನಗಳ ಮೊದಲು ಮಾಡಿ. ಅದನ್ನು ತಿರಸ್ಕರಿಸಿದರೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ಆ ಔಷಧಿಗೆ ಬೇರೆ ಪರ್ಯಾಯವಿದೆಯೇ ಎಂದು ನೋಡಿ.

ನಿಮ್ಮ ಔಷಧಿಗೆ ಅನುಮೋದನೆ ಸಿಕ್ಕರೆ, ನಿಮಗೊಂದು ಇಮೇಲ್ ಬರುತ್ತದೆ. ಆ ಇಮೇಲ್ ಅನ್ನು ಸಿಂಗಾಪುರದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ತೋರಿಸಿ ನಂತರ ಮುಂದುವರಿಯಬೇಕಾಗುತ್ತದೆ.

ಸಿಂಗಾಪುರದ ಬಗ್ಗೆ

ವಿಕಿವಾಯೇಜ್‌ನಲ್ಲಿ ಸಿಂಗಾಪುರದ ವಿವರವಾದ ಪ್ರಯಾಣ ಮಾರ್ಗದರ್ಶಿ ಪುಟವಿದೆ. ಇನ್ನೂ ವಿವರವಾದ ಹೆಚ್ಚಿನ ತಿಳುವಳಿಕೆಗಾಗಿ ವಿಕಿಪೀಡಿಯಾದಲ್ಲಿನ ಪುಟವನ್ನು ನೋಡಿ.

ಸಿಂಗಾಪುರದ ಬಗ್ಗೆ ಒಂದಿಷ್ಟು ಸಂಗತಿಗಳು
Demonym Singaporean
ಸಮಯ ವಲಯ UTC+8

Convert 9am Singapore to your timezone

ಸೂರ್ಯೋದಯ / ಸೂರ್ಯಾಸ್ತ 07:00 / 19:15 (ಸಮ್ಮೇಳನದ ದಿನಗಳಲ್ಲಿ)
ಅಧಿಕೃತ ಭಾಷೆಗಳು
ಪ್ರಮುಖ ಮತಗಳು
ಕರೆನ್ಸಿ ಸಿಂಗಾಪುರ ಡಾಲರ್ (SGD / $)

US$ 1.00 = SGD$ 1.35

೨೨ ಡಿಸೆಂಬರ್ ೨೦೨೨ನಂತೆ (check latest exchange rates)

ಹವಾಗುಣ
ಪ್ಲಗ್ ವಿಧ ಜಿ ಮಾದರಿ (ಬ್ರಿಟೀಷ್)

Mains: 230 V / 50 Hz

ವಾಹನ ಚಾಲನೆ ಬದಿ ಎಡಭಾಗದಲ್ಲಿ ಚಲಿಸುವುದು
ದೂರವಾಣಿ ಸಂಕೇತ +೬೫
ವಿಮಾನ ನಿಲ್ದಾಣಗಳು
ಜನಸಂಖ್ಯೆ 5,637,000 (೨೦೨೨ರ ಅಂದಾಜು)

ಜನಸಾಂದ್ರತೆ: 7,804/ಚದರ ಕಿಮಿ2 (೨೦೨೨)

ಒಟ್ಟು ಭೂಮಿ ವಿಸ್ತೀರ್ಣ ೭೩೩.೧ ಚದರ ಕಿ.ಮಿ.
Ride hailing / rideshare ಗೊಜೆಕ್, ಗ್ರಾಬ್, ರೈಡ್(Ryde), ಟಾಡ, ಝಿಗ್
ಪ್ರಮುಖ ಮೊಬೈಲ್ / ಅಂತರಜಾಲ
  • Singtel
  • Starhub
  • M1
  • Simba (formerly TPG)
ತುರ್ತು ಸಂಖ್ಯೆಗಳು
  • 995 (ಆಂಬುಲೆನ್ಸ್ & ಬೆಂಕಿ ಅವಘಡ ತುರ್ತು)
  • 999 (ತುರ್ತು ಪೊಲಿಸ್)
  • 1777 (ತುರ್ತು ಅಲ್ಲದ ಆಂಬುಲೆನ್ಸ್)
  • 71999 (ಪೋಲಿಸ್ ತುರ್ತು SMS)

ಧರಿಸಲು ಉಡುಪು

ಇಲ್ಲಿ ವರ್ಷಪೂರ್ತಿ ಬಿಸಿಲು ಮತ್ತು ಆರ್ದ್ರ ವಾತಾವರಣವಿರುತ್ತದೆ, ಹಗಲಿನಲ್ಲಿ ತಾಪಮಾನವು 30-32 C (86-90 F) ಇರುತ್ತದೆ. ಬಿಸಿ ವಾತಾವರಣಕ್ಕಾಗಿ ಕ್ಯಾಶುಯಲ್ ಉಡುಗೆಗಳನ್ನು ವ್ಯಾಪಕವಾಗಿ ಸ್ವೀಕರಿಸಲಾಗಿದೆ - ಶಾರ್ಟ್ಸ್, ಸ್ಕರ್ಟ್‌ಗಳು, ಶಾರ್ಟ್-ಸ್ಲೀವ್ ಶರ್ಟ್‌ಗಳು ಮತ್ತು ಫ್ಲಿಪ್-ಫ್ಲಾಪ್‌ಗಳು ಸಾಮಾನ್ಯವಾಗಿದೆ. ಆಗಸ್ಟ್‌ನಲ್ಲಿ ಮಳೆಯು ಸಾಮಾನ್ಯವಾಗಿದೆ, ಆದ್ದರಿಂದ ಹಗುರವಾದ ಬಟ್ಟೆ'' ಮತ್ತು ಛತ್ರಿಯನ್ನು ತರಲು ಶಿಫಾರಸು ಮಾಡಲಾಗಿದೆ. ನೀವು ಬಹುಶಃ ನಿಮ್ಮ ಮುಖ ಅಥವಾ ತೋಳುಗಳಿಗೆ ಕೆಲವು ರೀತಿಯ ಸನ್‌ಬ್ಲಾಕ್ ಅನ್ನು ಧರಿಸಲು ಬಯಸುತ್ತೀರಿ. ಬಿಸಿಯಾದ, ಆರ್ದ್ರತೆಯ ಹೊರಾಂಗಣದಿಂದ ತಂಪಾದ ಹವಾನಿಯಂತ್ರಿತ ಒಳಾಂಗಣ ಸ್ಥಳಗಳಿಗೆ ತೆರಳುವ ಮೂಲಕ ತಕ್ಷಣದ ಹವಾ ವೈಪರಿತ್ಯಗಳು ಸಾಮಾನ್ಯ, ಆದ್ದರಿಂದ ಶಾಲು ಅಥವಾ ಸ್ವೆಟರ್ ಅನ್ನು ತರುವುದು ಅಸಾಮಾನ್ಯವೇನಲ್ಲ. ಕ್ಲಬ್‌ಗಳು ಅಥವಾ ಉತ್ತಮ ಭೋಜನದಂತಹ ಕೆಲವು ಸ್ಥಳಗಳು ಉದ್ದವಾದ ಪ್ಯಾಂಟ್‌ಗಳಂತಹ ಡ್ರೆಸ್ ಕೋಡ್‌ಗಳನ್ನು ಹೊಂದಿರಬಹುದು.

ಸಿಮ್ ಕಾರ್ಡುಗಳು

ಸಿಂಗಪುರ ಚಾಂಗಿ ವಿಮಾನ ನಿಲ್ದಾಣ, Suntec City Mall ಮತ್ತು ಸಿಂಗಾಪುರದ ವಿವಿಧ 24/7 ಮಳಿಗೆಗಳಿಂದ ಸಿಮ್ (ಚಂದಾದಾರರ ಗುರುತಿನ ಮಾಡ್ಯೂಲ್) ಕಾರ್ಡ್‌ಗಳನ್ನು ಖರೀದಿಸಬಹುದು. ನೋಂದಣಿಗಾಗಿ ಪಾಸ್ಪೋರ್ಟ್ ಅನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಸಿಂಗಾಪುರದಲ್ಲಿ ದೂರವಾಣಿ ಸೇವೆ ಕೊಡುವ ಸಂಸ್ಥೆಗಳೆಂದರೆ ಸಿಂಗ್ಟೆಲ್, ಸ್ಟಾರ್‌ಹಬ್, ಎಮ್೧, ಸಿಂಬಾ (ಹಿಂದೆ TPG) ಸೇರಿವೆ.

ವಿದೇಶಿ ವಿನಿಮಯ

ಪ್ರಯಾಣಿಕನು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅಲ್ಲದೆ, Suntec City Mall ಮತ್ತು The Arcade Mall, Collyer Quay (ಪೋಸ್ಟಲ್ ಕೋಡ್ 049317) ನಂತಹ ಹಲವಾರು ಹಣ ವಿನಿಮಯ ಕೇಂದ್ರಗಳು ಸಹ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ಸಾಮಾನ್ಯ ಸ್ವೀಕಾರಾರ್ಹ ಬ್ಯಾಂಕ್ ನೋಟುಗಳೆಂದರೆ:

  • Australian Dollar (AUD)
  • Canadian Dollar (CAD)
  • Chinese Renminbi (CNH)
  • Danish Kroner (DKK)
  • Euro (EUR)
  • Hong Kong Dollar (HKD)
  • Indian Rupee (INR)
  • Indonesian Rupiah (IDR)
  • Japanese Yen (JPY)
  • Korean Won (KRW)
  • Malaysian Ringgit (MYR)
  • New Taiwan Dollar (TWD)
  • New Zealand Dollar (NZD)
  • Norwegian Kroner (NOK)
  • Philippine Peso (PHP)
  • Qatar Riyal (QAR)
  • Saudi Arabia Riyal (SAR)
  • Swedish Kroner (SEK)
  • Swiss Franc (CHF)
  • Thai Baht (THB)
  • UAE Dirham (AED)
  • UK Pound Sterling (GBP)
  • US Dollar (USD)
  • Vietnamese Dong (VND)